ಮಕ್ಕಳ ಓದಿಗೆ ಇಂಟರ್ನೆಟ್ ಎಷ್ಟು ಅವಶ್ಯ

 ಮಕ್ಕಳು ಓದುವಾಗ ಅಥವಾ ಬರೆಯುವಾಗ ಯಾವಾಗಲೂ ಹೇಳುತ್ತಿದ್ದೆ , ಒಂದೇ ಸೋರ್ಸ್ ನಂಬಿಕೊಬೇಡಿ .ಬೇರೆ ಬೇರೆ ಕಡೆ ಹುಡುಕಿ ಎಂದು ಹೇಳುತ್ತಿದ್ದೆ . ಮಕ್ಕಳಿಬ್ಬರು ನಾನು ಹೇಳಿದಂತೆ ಗೂಗಲ್ ಅಥವಾ ಬೇರೆ ಬೇರೆ ಪುಸ್ತಕಗಳನ್ನು ರೆಫರ್ ಮಾಡಿಕೊಳ್ಳುತ್ತಿದ್ದರು .

ಒಮ್ಮೆ ಊಟ ಮಾಡಿ ಹಾಗೆ ಹರಟುತ್ತ ಮಕ್ಕಳ ಜತೆ ಕುಳಿತಿದ್ದೆ .
ಒಂದೂವರೆ ವರ್ಷದಿಂದ ಮನೆಯಲ್ಲೇ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಿದ್ದ ದೊಡ್ಡ ಮಗಳಿಗೆ ಹೇಳಿದೆ ...ನಮ್ಮ ರೀತಿ ನಿಮಗೆ ಬಾಲ್ಯವೂ ಇಲ್ಲ... ಅಟ್ ಲೀಸ್ಟ್ ಕಾಲೇಜ್ ಲೈಫು ಕೂಡ ಇಲ್ಲ ಎಂದೆ .
ನಿನ್ನ ಕಾಲೇಜ್ ಲೈಫ್ ಹೇಗಿತ್ತು ?ಎಂದು ಕೇಳಿದಳು ದೊಡ್ಡ ಮಗಳು .
ನನ್ನ ಗೆಳತಿಯರ ಜೊತೆ ಪಿಕ್ಚರ್ ಗೆ ಹೋಗಿದ್ದು ,ಲೇಟಾಗಿ ಹೊದಾಗಾ ಲೆಕ್ಚರರ್ಸ್ ಕೈಲಿ ಬೈಸಿಕೊಂಡಿದ್ದು .ಕಾಲೇಜಿನಿಂದ ಟ್ರಿಪ್ ಹೋಗಿದ್ದು. ಅನೇಕ ನೆನಪುಗಳನ್ನು ಅವಳಿಗೆ ಹೇಳಿದೆ
ನಂತರ ನಿಮಗೆ ಮುಂದೆ ಕಾಲೇಜಿನ ನೆನಪುಗಳೇ ಇರುವುದಿಲ್ಲ .ಚಕ್ಕರ್ ಹೊಡೆಯುವುದು , ಲೆಕ್ಚರರ್ ಕೈಲಿ ಬೈಸಿಕೊಳ್ಳುವುದು .ಫ್ರೆಂಡ್ಸ್ ಜತೆ ಮೂವೀಗೆ ಹೋಗುವುದು . ಹುಡುಗ ಹುಡುಗಿಯರ ತರಲೆ ತುಂಟಾಟಗಳು ಯಾವುದೂ ಇಲ್ಲ .ನಮ್ಮ ಕಾಲೇಜು ಲೈಫು ಎಷ್ಟು ಕಲರ್ ಫುಲ್ ಆಗಿತ್ತು ಗೊತ್ತಾ ಎಂದೆ ...
ಇದನ್ನು ಕೇಳಿದ ದೊಡ್ಡ ಮಗಳು ನಿನಗೆ ಕಾಲೇಜಿನಲ್ಲಿ ಬರೀ ಹುಡುಗಿಯರಷ್ಟೇನ ಫ್ರೆಂಡ್ಸು ,...ಯಾರೂ ಬಾಯ್ ಫ್ರೆಂಡ್ಸ್ ಇರಲಿಲ್ಲವಾ? ಎಂದಳು
ನಮಗೆ ಇದಕ್ಕೆಲ್ಲ ಅವಕಾಶವೇ ಇರಲಿಲ್ಲ .ನಿಮ್ಮ ಮಾಮಾ ನನ್ನನ್ನು ಉಮೆನ್ಸ್ ಕಾಲೇಜಿಗೆ ಸೇರಿಸಿದ್ದನು . ಹಾಗಾಗಿ ನಮಗೆ ಬರೀ ಹುಡುಗಿಯರಷ್ಟೆ ಫ್ರೆಂಡ್ಸು ...ಹುಡುಗರು ಯಾರೂ ಫ್ರೆಂಡ್ಸ್ ಇರಲಿಲ್ಲ ಎಂದೆ .
ಆಗಷ್ಟೆ ಅಲ್ಲಿಗೆ ಬಂದ ಚಿಕ್ಕ ಮಗಳು ಯಾವುದೋ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದುಕೊಂಡು ...ನಾನು ಯಾವಾಗಲೂ ಹೇಳುತ್ತಿದ್ದುದನ್ನು ನನಗೆ ತಿರುಗಿಸಿ ಹೇಳಿದಳು "ನೀನು ಕಾಲೇಜನ್ನೇ ಯಾಕೆ ನಂಬಿಕೊಂಡಿದ್ಧೆ, ಬೇರೆ ಸೋರ್ಸ್ ಟ್ರೈ ಮಾಡ ಬೇಕಿತ್ತು"

Post a Comment

0 Comments